Tuesday, May 6, 2008


ನಾ ನೋಡಲು ಹೋದ ಮೀರಾ..ಮಾಧವ ರಾಘವ


ತಿಳಿ ಮುಗಿಲ ಸಂಜೆಯಲಿ

ಸುರಿವ ಜಡಿ ಮಳೆಯಲಿ

ನಾ ಹೊರಟೆ ರಮ್ಯಾ ನೋಡುವ ನಿರೀಕ್ಷೆಯಲಿ.


ಜನರಿಲ್ಲ ಚಿತ್ರಮಂದಿರದ ಆವರಣದಲ್ಲಿ

ನೂಕುನುಗ್ಗಲಿಲ್ಲ ,block ticket ಮಾರುವವರಿಲ್ಲ

ಆದರೂ ಮನಸ್ಸಿಗೆ ಹೊಳೆಯಲಿಲ್ಲ

ಮತ್ತದೇ ರಮ್ಯಾಳ ನಿರೀಕ್ಷೆಯಲಿ.


ಸಾಲು ಸರದಿ ಇಲ್ಲ ಚಿತ್ರ ಯಾವುದೆಂದೂ ನಾ ಕೇಳಲಿಲ್ಲ

ರಮ್ಯಾಳ ಗುಂಗಿನಿಂದ ಆಗಲೂ ಹೊರಬರಲಾಗಲಿಲ್ಲ

ಚಲನಚಿತ್ರ ನಡೆಯುತಿತ್ತು ನನ್ನ ಯೋಚನೆ ಸೀಟಿನ ಮೇಲಿತ್ತು

ಎತ್ತ ನೋಡಿದರೂ ಪ್ರೇಕ್ಷಕರ ಸುಳಿವಿಲ್ಲ,ಸೀಟಿ ಕಿರುಚಾಟದ ಸದ್ದಿಲ್ಲ.


ನಿರೀಕ್ಷಿಸುತಿದ್ದೆ ಪರದೆಯ ಮೇಲೆ ರಮ್ಯಾಳ ಪ್ರೀತಿ ಮಾತನ್ನಾ

ದರ್ಶನವಾಯಿತು ಆದಿದರ್ಶನರ ಸ್ನೇಹನಾ ಪ್ರೀತೀನಾ

ನಾನದೆ ಕ್ಷಣದಲ್ಲಿ ಅಲ್ಲಿಂದ ಪಲಾಯನ.



ಮಾವಿನಕೆರೆ ಪ್ರಶಾಂತ್

No comments: