Tuesday, May 6, 2008




ಕನ್ನಡ ತಾಯಿ ಭುವನೇಶ್ವರಿ




ಕನ್ನಡ ಕನ್ನಡ ಕನ್ನಡ
ನಿರ್ಲಕ್ಷಿಸದಿರು ಕನ್ನಡ
ಸಂರಕ್ಷಿಸು ಕನ್ನಡ
ಸ್ವರ್ಗಕ್ಕಿಂತ ಮಿಗಿಲು ತಾಯಿ , ತಾಯಿ ಭಾಷೆ ಕನ್ನಡ

ಅಚ್ಹ ಹಸಿರಿನ ಉಡುಗೆಯುಟ್ಟು
ಮೇಘಗಳಾ ಮಾಲೆ ತೊಟ್ಟು
ಗಿರಿ ಶಿಖರಗಳ ಬಾಸಿಂಗವ ತೊಟ್ಟು
ಹರಿವ ನೀರಲಿ ಗೆಜ್ಜೆಯ ಸದ್ದಿನ ನಾದವನ್ನಿತ್ತು
ಉದಯ ಕಿರಣದ ಸಿಂದೂರವ ತೊಟ್ಟು
ಪರಿಮಳದ ಹೂವ ಮುಡಿಗಿಟ್ಟು
ಏನೆಂದು ವರ್ಣಿಸಲಿ ತಾಯಿ ನಿನ್ನನು ....?

ಅಮ್ಮ ಎನ್ನುವ ಕಂದಮ್ಮನ ತೊದಲ ನುಡಿ
ಅವಳಿಗದೆ ಸಂತಸದ ಮೋಡಿ, ವಾತ್ಸಲ್ಯದ ನುಡಿ
ಕರುಣಾಮಯಿ ಈ ತಾಯಿ
ಇವಳೇ ಭುವನೇಶ್ವರಿ ಕನ್ನಡ ತಾಯಿ

ನಿನ್ನ ಅಪೂರ್ವ ಮಕ್ಕಳಿವರು
ಜ್ಞಾನಪೀಠ ತಂದವರು
ನಿನ್ನನ್ನು ಸಾಹಿತ್ಯ ಸಂಗೀತದಲಿ ಗುಣಗಾನ ಮಾಡಿದವರು
ಇತರೆ ನಿನ್ನ ಮಕ್ಕಳಿಗೆ ಮಾದರಿಯಾದವರು

ಜ್ಞಾನ- ಅಜ್ಞಾನದ ಬಲೆಯೊಳಗೆ
ಸಿಲುಕಿಹರು ನಿನ್ನ ಮಕ್ಕಳು
ಆಧುನಿಕತೆಯಲಿ ಎಲ್ಲಾ ಮರೆಯುತ್ತಲಿಹರು
ಮಮ್ಮಿ - ಡ್ಯಾಡಿ ಎಂದು ಕೋಲಾಹಲ ಎಬ್ಬಿಸುತಿಹರು

ಉಳಿಸಬೇಕು ಕರುನಾಡಲಿ ತಾಯಿಯ ಸ್ಥಾನ
ಅವಳಾಗಬೇಕು ನಮ್ಮೆಲ್ಲರ ಪ್ರಾಣ
ಕೊಡಬೇಕೆಲ್ಲರು ಅವಳಿಗೆ ಸ್ಥಾನ
ಇಂದು ಸಿಕ್ಕಿದೆ ತಾಯೆ ನಿನಗೆ ಶಾಸ್ತ್ರೀಯ ಸ್ಥಾನಮಾನ.

ಮಾವಿನಕೆರೆ ಪ್ರಶಾಂತ್





4 comments:

Unknown said...

ಅದ್ಭುತ..... ಮನೋಹರ ...... ಕನ್ನಡಾಂಬೆಗೆ ಜಯವಾಗಲಿ

ಪ್ರಶಾಂತ್ said...

ನಿಮ್ಮ ಸಂದೇಶಕ್ಕೆ ನನ್ನ ಧನ್ಯವಾದಗಳು .

Unknown said...

ಅದ್ಭುತ..... ಮನೋಹರ ...

Unknown said...

Gyr