
ಮನಸ್ಸಿನ ಹೂವು
ಓ ನನ್ನ ಮನಸ್ಸಿನ ಹೂವೆ
ಕನಸಿನಲ್ಲೇಕೆ ಕಾಡುವೆ
ಬಾಡದಿರು ನೀ ಚೆಲುವೆ
ನನ್ನ ಮನಸನು ನೀ ಅರಿಯೆ
ರವಿ ಚುಂಬನದ ರಶ್ಮಿಗೆ
ಹೂ ಅರಳುವುದು ಮೆಲ್ಲಗೆ
ನಾ ರವಿಯಾಗುವೆ
ಹೂವಾಗುವೆಯ ನೀ ಮಲ್ಲಿಗೆ ....
ನೀ ನಕ್ಕರೆ ಹುಣ್ಣಿಮೆಯ ಚಂದ್ರ
ನಾಚುವನು ನೋಡಿ ನಿನ್ನ ಅಂದ
ನಿನ್ನ ನಯನದೊಳಗಿನ ಬಿಂಬ
ನಾನಾಗಬೇಕೆನ್ನುವ ಆನಂದ
ನನ್ನ ಹೃದಯದ ಅರಮನೆಗೆ
ನೀ ಒಬ್ಬಳೇ ಪಟ್ಟದರಸಿ
ಬಯಸಿಹನು ಈ ಅರಸ
ಬರುವೆಯ ಅರಸಿ , ನನ್ನ ಬಯಸಿ
ಮಾವಿನಕೆರೆ ಪ್ರಶಾಂತ್
2 comments:
ನಮಸ್ಕಾರ ಪ್ರಶಾಂತ್, ನಿಮಗೊಂದು ಆಹ್ವಾನ ಪತ್ರಿಕೆ.
ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.
ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.
http://saadhaara.com/events/index/english
http://saadhaara.com/events/index/kannada
ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.
ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.
ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.
ನಿಮ್ಮ ಬೆಂಗಳೂರುವಾಸಿ ಸ್ನೇಹಿತರಿಗೆ link forward ಮಾಡಿ ಕನ್ನಡದ ಕಾರ್ಯಕ್ರಮ ಯಶಸ್ವಿಯಾಗುವುದಕ್ಕೆ ಸಹಕರಿಸಿ ಮತ್ತು ಹೀಗೆ ಸ್ಪಾಮ್ ಮಾಡಿ ಆಹ್ವಾನಿಸುತ್ತಿರುವುದಕ್ಕೆ ಕ್ಷಮೆಯಿರಲಿ.
ಗುರು
-ಕನ್ನಡಸಾಹಿತ್ಯ.ಕಾಂ ಬಳಗ
Post a Comment