Wednesday, February 11, 2009

ಪ್ರೇಮಿಗಳ ದಿನ

ಫೆಬ್ರವರಿ ತಿಂಗಳು ಬಂತೆಂದರೆ ಹರೆಯದ ಹುಡುಗ ಹುಡುಗಿಯರ ಮನಸ್ಸಿನಲ್ಲೇನೋ ಒಂದು ರೀತಿಯ ಸಂಚಲನ. ಎಷ್ಟು ಪ್ರಯತ್ನ ಪಟ್ಟರೂ ಮನಸ್ಸನ್ನು ತನ್ನ ಹಿಡಿತದಲ್ಲಿ ಹಿಡಿಯಲು ಮೌಂಟ್ ಎವೆರೆಸ್ಟ್ ಏರುವ ಸಾಹಸದಂತೆ ಪ್ರಯತ್ನ ಪಟ್ಟರು ಅಸಾದ್ಯ. ಪ್ರೇಯಸಿ ಅಥವಾ ಪ್ರಿಯತಮ ತನ್ನ ಮನಸ್ಸಿನೊಳಗೆ ಒಂದು ರೂಪ ಕೊಟ್ಟು ,ಸಿಗುವನೆಂಬ ಹಂಬಲ. ಮನಸ್ಸಿನ ನೈತಿಕ ಮೌಲ್ಯ (ಸಂಪ್ರದಾಯ) ಬೇಡವೆಂದರೂ ಕಣ್ಣುಗಳು ಮಾತ್ರ ಲಗಾಮು ಇಲ್ಲದ ಕುದುರೆಗಳು ಎಸ್ಟೆ ಪ್ರಯತ್ನ ಪಟ್ಟರೂ ನಿಲ್ಲದಷ್ಟು ಶಕ್ತಿ ಅವುಗಳಿಗೆ. ಹರೆಯದ ಹುಚ್ಚು ಮನ್ನಸ್ಸುಗಳ ಕಿತ್ತಾಟದ ನಡುವೆ ಅಪ್ಪ ಅಮ್ಮನ ಪರವಾನಿಗೆಗೆ ಸ್ವಲ್ಪ ಮನಸ್ಸಿನೊಳಗೆ ಜಾಗ ಕೊಟ್ಟು ಪ್ರೇಮನಿವೇದನೆ ಮಾಡಿಕೊಳ್ಳಬೇಕೆನ್ನುವ ಹಂಬಲ. ಹರೆಯದ ಹುಡುಗ ಹುಡುಗಿಗೆ ತನ್ನ ಗೆಳೆಯ ಅಥವಾ ಗೆಳತಿಗೆ "ನಾನು ನಿನ್ನ ಪ್ರೀತಿಸುವೆ " "I love you "ಎಂದು ಹೇಳುವ ಮುನ್ನ ಮನಸ್ಸಿನ್ನ ಒಂದು ಚಿಂತನೆ

ಪ್ರೇಮಿಗಳ ದಿನ



ಇಂದು ಪ್ರೇಮಿಗಳ ದಿನ
ಪ್ರೇಯಸಿಯ ಬಯಸುವ ಕ್ಷಣ
ನನ್ನೊಲವಿನ ಪಿಸುಮಾತನ್ನ
ಹೇಳಬಯಸುವೆ ಚಿನ್ನ ಕೇಳುವೆಯಾ ನನ್ನುಸಿರೆ ನೀ ಕೇಳುವೆಯಾ..?

ಹೂವಂಥ ಹೃದಯದವಳು
ಜಿಂಕೆಯಾ ಕಣಿನವಳು
ಹಂಸದಾ ನಡಿಗೆಯವಳು
ಕಾಮನಬಿಲ್ಲಂತೆ ಮೂಡಿಹಳು
ನನ್ನ ಹೃದಯದಲಿ ಪವಡಿಸಿಹಳು.

ಮೊದಲ ನೋಟದಲ್ಲೇ ಪ್ರೇಮಾಂಕುರ
ಪ್ರೀತಿ ಮಧುರ , ಆ ತುಟಿ ಜೇನು ಸುಮಧುರ
ನಾ ಬರಲೇ ನಿನ್ನ ಹತ್ತಿರ
ನೀ ಹೋಗದಿರು ದೂರ ದೂರ..

ಹೃದಯದ ಭಾವನೆಯ ಹೇಳುವ ಸಮಯ
ಮನಸ್ಸಿನ ದಿನಚರಿ ಪುಟಗಳ ತೆರೆಯುವ ಸಮಯ
ಹೇಳಲೇಕೋ ತಳಮಳ
ನೀ ನನ್ನವಳಾಗಬೇಕೆನ್ನುವ ಹಂಬಲ
ನಾ ಪಡೆಯಲೇ ಕೆಂಪು ಗುಲಾಬಿಯ ಸಹಾಯ..?


ಮಾವಿನಕೆರೆ ಪ್ರಶಾಂತ್

Tuesday, January 13, 2009

ನನ್ನ ಗೆಳತಿ



ನನ್ನ ಗೆಳತಿ

ನನ್ನ ಗೆಳತಿ ನನ್ನ ಗೆಳತಿ
ನೀ ನನ್ನ ಜೀವಕೆ ಒಡತಿ
ನನ್ನ ಗೆಳತಿ ನನ್ನ ಗೆಳತಿ
ನೀ ನನ್ನ ಭಾವಕೆ ಸ್ಫೂರ್ತಿ

ನನ್ನೊಲವು ಬಯಸಿದೆ ನಿನ್ನ ಮನವ
ಹೊಂಬೆಳಕ ಮೂಡಿಸು ಬಾ ಸನಿಹ
ಕಣ್ಣೊಳಗಿಹ ನಿನ್ನ ಬಿಂಬ ಮಿಂಚಾಗಿ ಕಣ್ಣಾ ತುಂಬಾ
ಅಚ್ಚಳಿಯದೆ ಉಳಿದಿದೆ ಮನದಿ ಬೇಕೆನ್ನುತ

ನನ್ನಾಸೆಯ ಹೂ ಬಳ್ಳಿಗೆ
ನಾನಾಗುವೆ ಆಸರೆ
ಬಿಗಿದಪ್ಪಿಕೋ ಒಮ್ಮೆ ನನ್ನ
ಓ ಮುದ್ದು ಮಲ್ಲಿಗೆ

ನಿನ್ನಂದ ಚಂದ ಮನಸೂರೆಗೊಂಡಿದೆ
ಮುಂಗಾರು ಮಳೆಯಂತೆ ಈ ಹೃದಯ ಕಾದಿದೆ
ಪ್ರೇಮಸಿಂಚನದ ಹನಿಗಳ ಸುರಿಸಿ
ಹೃದಯದ ಭಾವ ತಣಿಸು ಬಾ ಗೆಳತಿ

ನಿನ್ನ ನೋಡದ ದಿನ ಬರೀ ಕತ್ತಲು
ನನ್ನ ಮನಕೆ ಅಂದು ದಾರಿ ಇಲ್ಲ ಎತ್ತಲೂ
ಗೆಳೆಯನ ಮರೆಯದಿರು ನೀ ದೂರ ಹೋಗದಿರು
ನೀ ಬರುವವರೆಗೂ ನೆನಪುಗಳೇ ಸುತ್ತಲೂ.



ಮಾವಿನಕೆರೆ ಪ್ರಶಾಂತ್

Friday, November 14, 2008


ಇದು ನಾನು ಕೆಲವು ವಿವೇಕಾನಂದರ ಪುಸ್ತಕ ಹಾಗು ನನ್ನ ಗುರುಗಳು ಪಾಠ ಹೇಳುವಾಗ ನೆನಪಿನಲ್ಲಿಟ್ಟುಕೊಂಡ ಕೆಲವು ಪದಗಳನ್ನ ಉಪಯೋಗಿಸಿ ನಾನು ರಚಿಸಿದ ಕವಿತೆ .


ಇದರ ವಿಶೇಷತೆ ಏನೆಂದರೆ ಪ್ರತಿಯೊಬ್ಬನ(ಳ) ಮನಸ್ಸಿನ 2 ಮನಸ್ಸುಗಳ ಚರ್ಚೆ. ಒಬ್ಬ ವ್ಯಕ್ತಿ ಯೋಚನೆಯಲ್ಲಿ ಇದ್ದಾಗ ಹೇಗೆ ಅವರವರ ಮನಸ್ಸುಗಳು ಜೀವನದ ಬಗ್ಗೆ ಚರ್ಚೆ ಮಾಡುತ್ತವೆ ಎಂಬುದನ್ನ ಹೇಳುವ ಒಂದು ಪ್ರಯತ್ನ .


ಜೀವನ

ಜೀವಿಸಲು
ನವಾಸ ಪಡುವ
ರ ಮಾನವನಿಗೆ ಮಾತ್ರವೇ ....?

ಕಷ್ಟ ಬಂದಾಗ ಕುಗ್ಗದೆ ,ಸುಖ ಬಂದಾಗ ಹಿಗ್ಗದೆ
ಧೈರ್ಯದಲಿ ಮುನ್ನುಗುವುದೇ ..?
ಮನಸ್ಸುಗಳ ತೋಳಲಾಟಕೆ ಅವಕಾಶ ಮಾಡಿಕೊಡುವುದೇ..?
ಮನಸ್ಸಿನ ಭಾವನೆಗಳನ್ನು ನಿಯಂತ್ರಿಸಿ
ಕಷ್ಟ ಸುಖಗಳನ್ನು ಅನುಭವಿಸುವುದೇ..?
ಇದಕ್ಕೆ ಬೇಕೆನಿಸುತ್ತಿದೆ ಹಿರಿಯರ ಅನುಭವದ ಮಾತು .

ಸೋಲೋಪ್ಪಿಕೊಳ್ಳುವುದಿಲ್ಲವೆಂದರೂ
ಬರುವ ಸೋಲನು ಸವಾಲಾಗಿ ಪರಿಗಣಿಸು..
ಮನಸ್ಸನು ಶ್ರೇಷ್ಟ ಆಲೋಚನೆಗಳಿಂದ ತುಂಬು
ಪ್ರತಿದಿನವೂ ಅವನ್ನು ಕುರಿತು ಯೋಚಿಸು
ಇದೆ ಇರಬೇಕು ಜೀವನ ...........!

ಅಭಿಯಂತರ , ವೈದ್ಯ,ಕನೂನು ಪದವಿಯ ಪಡೆವರು
ಜೀವನದ ಪದವಿಯ ಯಾರು ಕೊಡುವರು ...?
ಜೀವನವೆಂಬ ವಿಶ್ವವಿದ್ಯಾಲಯದಲ್ಲಿ
ಮನಸ್ಸೆಂಬ ಒಂದೇ ವಿಷಯದಲಿ
ಪದವಿಯ ಕೊಡುವವರು ಯಾರು?

ಜೀವನದ ಪದವಿಗೆ ಪಾಸು ನಪಾಸಿನ ಪ್ರಶ್ನೆ ಇಲ್ಲ.
ನಿರಂತರ ಕಲಿಕೆಯೇ ಜೀವನ
ಜೀವನವೆಂದರೆ ಸೋತು ಸುಮ್ಮನಾಗುವುದಲ್ಲ
ಅದಕ್ಕೆ ಪರಿಶ್ರಮದ ದಂಡನೆ ಅಗತ್ಯ .

ಮಾವಿನಕೆರೆ ಪ್ರಶಾಂತ್ ಎಂ ಎಸ್

Tuesday, October 7, 2008

ಮೈಸೂರು ದಸರಾ







ಮೈಸೂರು ದಸರಾ

ಮೈಸೂರು ದಸರಾ
ನೋಡಲೆಷ್ಟು ಸುಂದರ
ಬರುವುದು ಜನಸಾಗರ
ನೋಡಲು ಆನೆ ಅಂಬಾರಿಯ ಸಡಗರ

ಹೊರಡುವುದು ಮೆರವಣಿಗೆ ಅರಮನೆಯಿಂದ
ನಡೆಸುವರು ರಾಜರು ದರ್ಬಾರನು ರಾಜಗಾಂಭೀರ್ಯದಿಂದ
ವಿಶ್ವವಿಖ್ಯಾತ ದಸರಾ ನಡೆಯುವುದು ವಿಜೃಂಭಣೆಯಿಂದ
ಧನ್ಯರಾಗುವರೆಲ್ಲಾ ಸಂತಸದಿಂದ

ಮೈಸೂರ್ ಪಾಕ್, ಮೈಸೂರ್ ಮಲ್ಲಿಗೆ, ಮೈಸೂರ್ ರೇಷ್ಮೆ ಚಂದ
ಮೈಸೂರು ಗಂಧ ,ಮೈಸೂರು ಜನರ ಮನವೂ ಅಂದ
ಹೃದಯವಂತರು ಮೈಸೂರು ಜನರು
ನೋಡಬೇಕು ದಸರಾ ಜೀವನದಲ್ಲಿ ಒಮ್ಮೆಯಾದರು

ಆದಿಶಕ್ತಿ ,ಶಕ್ತಿದೇವತೆ ಚಾಮುಂಡಿ ಆರಾಧನೆ
ಭಕ್ತರೆಲ್ಲರಲೂ ಮೂಡುವುದು ಭಕ್ತಿಯ ಅರಮನೆ
ಚಿನ್ನದಂಬಾರಿಯ ಮೇಲೆ ಚಾಮುಂಡಿಯ ಆಗಮನ
ತಲೆಬಾಗಿ ,ನಮಿಸಿ ಹೇಳುವರು ಆಕೆಯ ಗುಣಗಾನ


ಮಾವಿನಕೆರೆ ಪ್ರಶಾಂತ್

Tuesday, May 13, 2008


ಮನಸ್ಸಿನ ಹೂವು



ಓ ನನ್ನ ಮನಸ್ಸಿನ ಹೂವೆ
ಕನಸಿನಲ್ಲೇಕೆ ಕಾಡುವೆ
ಬಾಡದಿರು ನೀ ಚೆಲುವೆ
ನನ್ನ ಮನಸನು ನೀ ಅರಿಯೆ


ರವಿ ಚುಂಬನದ ರಶ್ಮಿಗೆ
ಹೂ ಅರಳುವುದು ಮೆಲ್ಲಗೆ
ನಾ ರವಿಯಾಗುವೆ
ಹೂವಾಗುವೆಯ ನೀ ಮಲ್ಲಿಗೆ ....


ನೀ ನಕ್ಕರೆ ಹುಣ್ಣಿಮೆಯ ಚಂದ್ರ
ನಾಚುವನು ನೋಡಿ ನಿನ್ನ ಅಂದ
ನಿನ್ನ ನಯನದೊಳಗಿನ ಬಿಂಬ
ನಾನಾಗಬೇಕೆನ್ನುವ ಆನಂದ


ನನ್ನ ಹೃದಯದ ಅರಮನೆಗೆ
ನೀ ಒಬ್ಬಳೇ ಪಟ್ಟದರಸಿ

ಬಯಸಿಹನು ಈ ಅರಸ
ಬರುವೆಯ ಅರಸಿ , ನನ್ನ ಬಯಸಿ


ಮಾವಿನಕೆರೆ ಪ್ರಶಾಂತ್

Tuesday, May 6, 2008




ಕನ್ನಡ ತಾಯಿ ಭುವನೇಶ್ವರಿ




ಕನ್ನಡ ಕನ್ನಡ ಕನ್ನಡ
ನಿರ್ಲಕ್ಷಿಸದಿರು ಕನ್ನಡ
ಸಂರಕ್ಷಿಸು ಕನ್ನಡ
ಸ್ವರ್ಗಕ್ಕಿಂತ ಮಿಗಿಲು ತಾಯಿ , ತಾಯಿ ಭಾಷೆ ಕನ್ನಡ

ಅಚ್ಹ ಹಸಿರಿನ ಉಡುಗೆಯುಟ್ಟು
ಮೇಘಗಳಾ ಮಾಲೆ ತೊಟ್ಟು
ಗಿರಿ ಶಿಖರಗಳ ಬಾಸಿಂಗವ ತೊಟ್ಟು
ಹರಿವ ನೀರಲಿ ಗೆಜ್ಜೆಯ ಸದ್ದಿನ ನಾದವನ್ನಿತ್ತು
ಉದಯ ಕಿರಣದ ಸಿಂದೂರವ ತೊಟ್ಟು
ಪರಿಮಳದ ಹೂವ ಮುಡಿಗಿಟ್ಟು
ಏನೆಂದು ವರ್ಣಿಸಲಿ ತಾಯಿ ನಿನ್ನನು ....?

ಅಮ್ಮ ಎನ್ನುವ ಕಂದಮ್ಮನ ತೊದಲ ನುಡಿ
ಅವಳಿಗದೆ ಸಂತಸದ ಮೋಡಿ, ವಾತ್ಸಲ್ಯದ ನುಡಿ
ಕರುಣಾಮಯಿ ಈ ತಾಯಿ
ಇವಳೇ ಭುವನೇಶ್ವರಿ ಕನ್ನಡ ತಾಯಿ

ನಿನ್ನ ಅಪೂರ್ವ ಮಕ್ಕಳಿವರು
ಜ್ಞಾನಪೀಠ ತಂದವರು
ನಿನ್ನನ್ನು ಸಾಹಿತ್ಯ ಸಂಗೀತದಲಿ ಗುಣಗಾನ ಮಾಡಿದವರು
ಇತರೆ ನಿನ್ನ ಮಕ್ಕಳಿಗೆ ಮಾದರಿಯಾದವರು

ಜ್ಞಾನ- ಅಜ್ಞಾನದ ಬಲೆಯೊಳಗೆ
ಸಿಲುಕಿಹರು ನಿನ್ನ ಮಕ್ಕಳು
ಆಧುನಿಕತೆಯಲಿ ಎಲ್ಲಾ ಮರೆಯುತ್ತಲಿಹರು
ಮಮ್ಮಿ - ಡ್ಯಾಡಿ ಎಂದು ಕೋಲಾಹಲ ಎಬ್ಬಿಸುತಿಹರು

ಉಳಿಸಬೇಕು ಕರುನಾಡಲಿ ತಾಯಿಯ ಸ್ಥಾನ
ಅವಳಾಗಬೇಕು ನಮ್ಮೆಲ್ಲರ ಪ್ರಾಣ
ಕೊಡಬೇಕೆಲ್ಲರು ಅವಳಿಗೆ ಸ್ಥಾನ
ಇಂದು ಸಿಕ್ಕಿದೆ ತಾಯೆ ನಿನಗೆ ಶಾಸ್ತ್ರೀಯ ಸ್ಥಾನಮಾನ.

ಮಾವಿನಕೆರೆ ಪ್ರಶಾಂತ್





ಸ್ವಾತಂತ್ರ್ಯದ ದಿನ




ಭಾರತ ಸ್ವಾತಂತ್ರ್ಯದ 63 ನೇ ಶುಭ ದಿನ
ತರುವುದೇ ನಮಗೆ ಸಂತಸದ ದಿನ..... ?
ಹಿಂದೆ ದೇಶಪ್ರೇಮಕ್ಕೆ ತ್ಯಾಗ ಬಲಿದಾನ
ಇಂದು ಯುವಪೀಳಿಗೆಗೆ ಆದ ಹೇಳಲು ಸಮಯವಿಲ್ಲದ ದಿನ.

ತಂದರು ಸ್ವಾತಂತ್ರ್ಯವನು ಹಿರಿಯರು ನೆತ್ತರು ಹರಿಸಿ
ಉಳಿಸಿಕೊಳ್ಳೂವರೆ ಇವರು ಬೆವರು ಸುರಿಸಿ.....?

ಹಿಂದೊಮ್ಮೆ ಭಾರತೀಯರ ಮೂಲ ಮಂತ್ರ ಅಹಿಂಸೆ
ಇಂದು ತಂಡವವಾಡುತಿದೆ ಎಲ್ಲೆಡೆ ಹಿಂಸೆ..

ನಲುಗಿದಳು ಭಾರತಾಂಬೆ ಪಾಶ್ಚಿಮಾತ್ಯರ ಕೈಯಲ್ಲಿ
ಇಂದು ಅನುಸರಿಸುತಿದ್ದಾರೆ ಪಾಶ್ಚಿಮಾತ್ಯ ಸಂಸ್ಕೃತಿ ಅಂದಾನುಕಾರಣದಲಿ.

ಇನ್ದಿಲ್ಲ ದೇಶದಲಿ ಪ್ರಾಮಾಣಿಕತೆ, ಸಹಾಬಾಳ್ವೆ, ಸ್ಪೂರ್ಥಿಸಹಕಾರ..
ಕೊಡುತಿದ್ದಾರೆ ಭಯೋತ್ಪಾದನೆ ಚಟುವಟಿಕೆಗೆ ಸಹಕಾರ........


ಪ್ರಶಾಂತ್
ಐ ಎಚ್ ಎಸ್