
ನನ್ನ ಗೆಳತಿ
ನನ್ನ ಗೆಳತಿ ನನ್ನ ಗೆಳತಿ
ನೀ ನನ್ನ ಜೀವಕೆ ಒಡತಿ
ನನ್ನ ಗೆಳತಿ ನನ್ನ ಗೆಳತಿ
ನೀ ನನ್ನ ಭಾವಕೆ ಸ್ಫೂರ್ತಿ
ನನ್ನೊಲವು ಬಯಸಿದೆ ನಿನ್ನ ಮನವ
ಹೊಂಬೆಳಕ ಮೂಡಿಸು ಬಾ ಸನಿಹ
ಕಣ್ಣೊಳಗಿಹ ನಿನ್ನ ಬಿಂಬ ಮಿಂಚಾಗಿ ಕಣ್ಣಾ ತುಂಬಾ
ಅಚ್ಚಳಿಯದೆ ಉಳಿದಿದೆ ಮನದಿ ಬೇಕೆನ್ನುತ
ನನ್ನಾಸೆಯ ಹೂ ಬಳ್ಳಿಗೆ
ನಾನಾಗುವೆ ಆಸರೆ
ಬಿಗಿದಪ್ಪಿಕೋ ಒಮ್ಮೆ ನನ್ನ
ಓ ಮುದ್ದು ಮಲ್ಲಿಗೆ
ನಿನ್ನಂದ ಚಂದ ಮನಸೂರೆಗೊಂಡಿದೆ
ಮುಂಗಾರು ಮಳೆಯಂತೆ ಈ ಹೃದಯ ಕಾದಿದೆ
ಪ್ರೇಮಸಿಂಚನದ ಹನಿಗಳ ಸುರಿಸಿ
ಹೃದಯದ ಭಾವ ತಣಿಸು ಬಾ ಗೆಳತಿ
ನಿನ್ನ ನೋಡದ ದಿನ ಬರೀ ಕತ್ತಲು
ನನ್ನ ಮನಕೆ ಅಂದು ದಾರಿ ಇಲ್ಲ ಎತ್ತಲೂ
ಗೆಳೆಯನ ಮರೆಯದಿರು ನೀ ದೂರ ಹೋಗದಿರು
ನೀ ಬರುವವರೆಗೂ ನೆನಪುಗಳೇ ಸುತ್ತಲೂ.
ಮಾವಿನಕೆರೆ ಪ್ರಶಾಂತ್
1 comment:
Wonderful prashanth. keep updating the new lines...
Post a Comment