
ಇದು ನಾನು ಕೆಲವು ವಿವೇಕಾನಂದರ ಪುಸ್ತಕ ಹಾಗು ನನ್ನ ಗುರುಗಳು ಪಾಠ ಹೇಳುವಾಗ ನೆನಪಿನಲ್ಲಿಟ್ಟುಕೊಂಡ ಕೆಲವು ಪದಗಳನ್ನ ಉಪಯೋಗಿಸಿ ನಾನು ರಚಿಸಿದ ಕವಿತೆ .
ಇದರ ವಿಶೇಷತೆ ಏನೆಂದರೆ ಪ್ರತಿಯೊಬ್ಬನ(ಳ) ಮನಸ್ಸಿನ 2 ಮನಸ್ಸುಗಳ ಚರ್ಚೆ. ಒಬ್ಬ ವ್ಯಕ್ತಿ ಯೋಚನೆಯಲ್ಲಿ ಇದ್ದಾಗ ಹೇಗೆ ಅವರವರ ಮನಸ್ಸುಗಳು ಜೀವನದ ಬಗ್ಗೆ ಚರ್ಚೆ ಮಾಡುತ್ತವೆ ಎಂಬುದನ್ನ ಹೇಳುವ ಒಂದು ಪ್ರಯತ್ನ .
ಜೀವನ
ಜೀವಿಸಲು
ವನವಾಸ ಪಡುವ
ನರ ಮಾನವನಿಗೆ ಮಾತ್ರವೇ ....?
ಕಷ್ಟ ಬಂದಾಗ ಕುಗ್ಗದೆ ,ಸುಖ ಬಂದಾಗ ಹಿಗ್ಗದೆ
ಧೈರ್ಯದಲಿ ಮುನ್ನುಗುವುದೇ ..?
ಮನಸ್ಸುಗಳ ತೋಳಲಾಟಕೆ ಅವಕಾಶ ಮಾಡಿಕೊಡುವುದೇ..?
ಮನಸ್ಸಿನ ಭಾವನೆಗಳನ್ನು ನಿಯಂತ್ರಿಸಿ
ಕಷ್ಟ ಸುಖಗಳನ್ನು ಅನುಭವಿಸುವುದೇ..?
ಇದಕ್ಕೆ ಬೇಕೆನಿಸುತ್ತಿದೆ ಹಿರಿಯರ ಅನುಭವದ ಮಾತು .
ಸೋಲೋಪ್ಪಿಕೊಳ್ಳುವುದಿಲ್ಲವೆಂದರೂ
ಬರುವ ಸೋಲನು ಸವಾಲಾಗಿ ಪರಿಗಣಿಸು..
ಮನಸ್ಸನು ಶ್ರೇಷ್ಟ ಆಲೋಚನೆಗಳಿಂದ ತುಂಬು
ಪ್ರತಿದಿನವೂ ಅವನ್ನು ಕುರಿತು ಯೋಚಿಸು
ಇದೆ ಇರಬೇಕು ಜೀವನ ...........!
ಅಭಿಯಂತರ , ವೈದ್ಯ,ಕನೂನು ಪದವಿಯ ಪಡೆವರು
ಜೀವನದ ಪದವಿಯ ಯಾರು ಕೊಡುವರು ...?
ಜೀವನವೆಂಬ ವಿಶ್ವವಿದ್ಯಾಲಯದಲ್ಲಿ
ಮನಸ್ಸೆಂಬ ಒಂದೇ ವಿಷಯದಲಿ
ಪದವಿಯ ಕೊಡುವವರು ಯಾರು?
ಜೀವನದ ಪದವಿಗೆ ಪಾಸು ನಪಾಸಿನ ಪ್ರಶ್ನೆ ಇಲ್ಲ.
ನಿರಂತರ ಕಲಿಕೆಯೇ ಜೀವನ
ಜೀವನವೆಂದರೆ ಸೋತು ಸುಮ್ಮನಾಗುವುದಲ್ಲ
ಅದಕ್ಕೆ ಪರಿಶ್ರಮದ ದಂಡನೆ ಅಗತ್ಯ .
ಮಾವಿನಕೆರೆ ಪ್ರಶಾಂತ್ ಎಂ ಎಸ್